ನಮ್ಮಬಗ್ಗೆ > ಮೈಲಿಗಲ್ಲುಗಳು
 

1. 2011 ರ ಜುಲೈ 22 ರಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುರಿತ ಅಧಿಸೂಚನೆ: ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂ.ವ್ಯ.ಶಾ.ಇ.33 ಶಾಸನ 2011, ಬೆಂಗಳೂರು.


2. 2011 ರ ಜುಲೈ 27 ರಂದು ಪ್ರೊ. ಅಂಬಳಿಕೆ ಹಿರಿಯಣ್ಣ ಅವರನ್ನು ನೂತನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ನೇಮಿಸಲಾಯಿತು.


3. 2011 ರ ನವೆಂಬರ್ 29 ರಂದು ಜಾನಪದ ವಿಶ್ವವಿದ್ಯಾಲಯದ ಲಾಂಛನ, ಧ್ಯೇಯವಾಕ್ಯ ಹಾಗೂ ವೆಬ್ ಸೈಟ್ ಅನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಬಿಡುಗಡೆಗೊಳಿಸಿದರು.


4. 2011 ರ ಡಿಸೆಂಬರ್ 10 ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧ್ಯಾದೇಶ-2011 ಕ್ಕೆ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿತು. ಈ ಮಸೂದೆಯನ್ನು ನೂತನ ಕಾಯ್ದೆಯನ್ವಯ ಸದನದ ಒಪ್ಪಿಗೆ ಪಡೆದು ಜಾರಿಗೊಳಿಸಲಾಯಿತು.


5. 2011 ರ ಡಿಸೆಂಬರ್ 15 ರಂದು ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಸಂಬಂಧದ ಅಧ್ಯಾದೇಶಕ್ಕೆ ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದ ಅಂಗೀಕಾರ ದೊರಕಿತು.


6. 2012 ರ ಜನವರಿ 25 ರಂದು ಕರ್ನಾಟಕ ವಿಧಾನ ಪರಿಷತ್ತಿನಿಂದ 'ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮ-2011' ಅಂಗೀಕಾರವಾಯಿತು.


7. 2012 ರ ಫೆಬ್ರವರಿ 4 ರಂದು ವಿಧಾನಸಭೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ವಿಧೇಯಕವನ್ನು ಮಂಡಿಸಲಾಯಿತು.


8. 2012 ರ ಫೆಬ್ರವರಿ 21 ರಂದು ಜಾನಪದ ವಿಶ್ವವಿದ್ಯಾಲಯದ ವಿಧೇಯಕಕ್ಕೆ ರಾಜ್ಯಪಾಲರಾದ ಶ್ರೀ ಹಂಸರಾಜ ಭಾರದ್ವಾಜ ಅವರಿಂದ ಅಂಕಿತ ದೊರಕಿತು.


9. 2012 ರ ಕರ್ನಾಟಕ ಅಧಿನಿಯಮ ಸಂಖ್ಯೆ:11, 2012 ರ ಫೆಬ್ರವರಿ 23 ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಯಿತು.


10. 2012 ರ ಮೇ 27 ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಪರಿಷತ್ತಿಗೆ ಸದಸ್ಯರ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿತು.

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ :